ಕರ್ನಾಟಕದ ಉತ್ತಮ ಬರಹಗಾರ್ತಿಯಲ್ಲೊಬ್ಬರು.ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು. ಇವರ ಮೊದಲ ಸಾಹಿತ್ಯವು ಕಥಾ ಪ್ರಕಾರದಲ್ಲಿದೆ. ಇವರ ಕೆಲವು ಸಾಹಿತ್ಯಗಳು ಹಿಂದಿ ಭಾಷೆಯಿಂದ ಅನುವಾದಕೊಂಡಿವೆ. ಇವರು ೧೯೪೪ ರ ಜುಲೈ ೧೭ ರಂದು ಜನಿಸಿದರು. ಮೂಲತಃ ಧಾರವಾಡದವರು. ತಂದೆ ಗುಂಡಾಸೂರ್ಯ ಹಾಗು ತಾಯಿ ಇಂದಿರಾಬಾಯಿ. ನಾಟಕ ಕಲಾವಿದರಾದ ಜಿ. ಹೆಚ್. ಕುಲಕರ್ಣಿಯವರೊಂದಿಗೆ ವಿವಾಹವಾದರು, ಈ ದಂಪತಿಗಳು ಸಮಾನ ಹವ್ಯಾಸಗಳನ್ನು ಬೆಳಸಿಕೊಂಡಿದ್ದಾರೆ. ಈಗ ಎರಡು ವರ್ಷಗಳಿಂದ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ. ಮಗಳು ತೃಪ್ತಿ ಹಾಗೂ ಅಳಿಯ ಅವಿನಾಶ್. ಸಂಗೀತದಲ್ಲಿ ಸಮಾನ ಅಸಕ್ತಿ ಹೊಂದಿದ ಇವರು ಸುರತ್ಕನಲ್ಲಿ ಭಜನ್ ಸಂಧ್ಯಾಗಳನ್ನು ನಡೆಸುತ್ತಿದ್ದರು. ಹಿಂದಿ ಭಾಷೆಯಲ್ಲಿ ಸ್ನಾತಕೊತ್ತರ ಪದವಿ ಪಡೆದ ಇವರು ಉಪನ್ಯಾಸಕಿಯಾಗಿ ದುಡಿದರು. == ಕೃತಿಗಳು == ಕಣ್ಣು ತೆರೆದಾಗ ಹೀಗೊಂದು ಹಾಸ್ಯ ಪ್ರಸಂಗ, ಹಿಂದಿ ಪಾಠ, ಚಿಂತನ === ಕಥಾಸಂಕಲನಗಳು === ಸಂಕೋಲೆಯಾಚೆ, ಅಪರಾಜಿತೆ === ಕಿರುನಾಟಕಗಳು === ಕೆಲಸ ಕೆಲಸ, ಮರಳಿ ಬಂದಾಗ, ಕ್ಷಮಯಾಧರಿತ್ರಿ === ಲೇಖನ ಸಂಕಲನ === ಮಹಾದೇವಿಯವರ ಸಾಹಿತ್ಯ ದಲ್ಲಿ ಮಳೆ === ಕಿರುಕತೆ === ಆ ನೋಟ == ಉಲ್ಲೇಖಗಳು ==